Saturday 7 January 2012

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.     

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.                                                                    
ಬೇಕಾಗಿಯೂ ಇಲ್ಲ ಸಮರ್ಥನೆಯ  ಕಾವು

ಅತ್ತು ಆತ್ತು ಕಣ್ಣೀರು ಬತ್ತಿ ಹೋಗಿದೆ.
ಕನಸುಗಳೂ ಈಗೀಗ ನಿಂತು ಹೋಗಿದೆ
ಮನಸಿನಲ್ಲಿನ ನಿನ್ನ ನೆನಪುಗಳು ಮಾಯವಾಗಿವೆ
ಕಂಗಳಿವೆ ರೆಪ್ಪೆಗಳ ರಕ್ಷಣೆಯಲ್ಲಿ, ನೋಟ ಬರಿದಾಗಿದೆ

ದಿನಗಳನು ಎಣಿಸುತ ನಿನ್ನ ಬರುವಿಕೆ ಕಾದದ್ದು ನಾನೇನಾ ?
ಮು೦ಗುರುಳ ಕೆಣಕುತ  ಕೈ ಅದುಮಿ ನಾನಿರುವೆ ಎಂದಿದ್ದು ನೀನೇನಾ?
ಕೊನೆವರೆಗೂ ಒಟ್ಟಿಗೆ ಸಾಗೋಣ ಬಾಳಿನ ದಾರಿಯಲಿ ಅ೦ದ್ಕೊ೦ಡಿದ್ದು ನಾವೇನಾ ?
ಒಹ್ ಪ್ರೀತಿಯೇ ಒಡೆದ ಕನ್ನಡಿಯ ನೆನಪಿಸುವೆಯ೦ತೆ ನಿಜವೆನಾ ?

ಕಂಡೊಡನೆ ಪಳ ಪಳ ಸುರಿದ ಕಣ್ಣೀರ ಒರೆಸಿದ ನಿನ್ನ ತೋರ್ಬೇರಳಿಗೂ
ಇದು ಸರಿ ಅನ್ನಿಸುವುದೇ ಇಲ್ಲ, ಬೇಕಾದರೆ ಕೇಳಿ ನೋಡು ಇ೦ದಿಗೂ !
ನಿನ್ನ ಒಂದೊಂದು ನೆನಪು ಇಷ್ಟಪಟ್ಟೇ ಉಸಿರಲಿ ಇರಿಸಿಕೊಂಡಿದ್ದೆ
ಧಮನಿಗಳಲರಿವ ನೆತ್ತರ ಕಣಗಳಲ್ಲೂ   ಬೆರೆಸಿಕೊಂಡಿದ್ದೆ
ಇಂದು ಯಾಕೋ ಮುಳ್ಳುಗಳಾಗಿ ಬದಲಾಗಿವೆ,
ಅಣು ಅಣುವನೂ ತಿವಿದು ಚುಚ್ಚುತಿವೆ !
ಇದೇನಾ ಪ್ರೇಮ ಪ್ರೀತಿ ಕೊಟ್ಟ ಬಹು ದೊಡ್ಡ ಕಾಣಿಕೆ !


ಹೇಳಲಾರೆ ನೀ ಇರದೇ ನಾ ಇರಲಾರೆ ಎಂದು,
ಹಾಗಂತ ನೀ ಕರೆಯದೆ ನೀ ಇರುವಲ್ಲಿಗೆ ಬರಲಾರೆ ,
ಮನಸು ಮರ್ಕಟ! ಒಂದೇ ನಿಲುವಿನಲ್ಲಿ ನಿಲ್ಲಲಾರೆ ,
ಹೆಣ್ಣಿಗೂ ಒಂದು ಹಮ್ಮು ಇರುತ್ತೋ ಇನಿಯಾ... ಎ೦ದೆ೦ದೂ!

ಸಾಕು! ಕೊಡಬೇಡ ಹುಡುಗ ಮತ್ತಷ್ಟು ನೋವು.
ಬೇಕಾಗಿಯೂ ಇಲ್ಲ ಸಮರ್ಥನೆಯ  ಕಾವು



1 comment:

  1. ಹುಡುಗಿ ನೊಂದಿದ್ದಾಳೆ, ಹುಡುಗನ ಅಕ್ಕರೆ ಬೇಕಾಗಿದೆ. ಕವಿಯ ಒಳಹೂ ಅರ್ಥವಾಗುತ್ತದೆ ನಮಗೆ.

    ಸುಲಭ ಭಾಷೆಯಲ್ಲಿ ಕವನ ಬರೆಯುವ ಶೈಲಿ ಇಷ್ಟವಾಯಿತು.

    ನನ್ನ ಬ್ಲಾಗಿಗೂ ಸ್ವಾಗತ.
    www.badari-poems.blogspot.com

    ReplyDelete