Wednesday 23 November 2011

ನನ್ನದಿನ್ನೆಂದಿಗೂ ಬೆಳಕಿಲ್ಲದ ಬದುಕು

 ಇಲ್ಲಿ ಹುಟ್ಟು ಇಲ್ಲ, ಸಾವು ಇಲ್ಲ, ನಲಿವು ಮೊದಲೇ ಇಲ್ಲ
ದುಗುಡಕ್ಕೆ ಎಣೆಯೇ ಇಲ್ಲ,
ಸುರಿವ ಕಂಬನಿಗೆ ಅಳತೆಯೂ ಇಲ್ಲ.
ಮುಖದ ಮೇಲೆ ತಂದುಕೊಳ್ಳುವ
ಮಾಸಲು ನಗೆ , ಸಂತಸಗಳು ಕೇವಲ
ಬಣ್ಣದ ವೇಷ !
ಅದೂ... ಇನ್ನಿಲ್ಲದಂತೆ ಕಾಡುತ್ತಿರುವ
ನಿನ್ನ ನೆನಪುಗಳ ಮರೆಮಾಚಲು !!

ಗೊತ್ತು ಗುರಿಗಳಿಲ್ಲದೆ ನಿನ್ನ ನೆನಪುಗಳ
ಬುತ್ತಿ ಕಟ್ಟಿಕೊಂಡು ಕಾಲೆಳೆಯುತ್ತಾ ಸಾಗಿರುವ
ನಾನೂ ಒಂದೂ ಜೀವಂತ ಶವ !
 !!

No comments:

Post a Comment