Wednesday 23 November 2011

ಸುನಾಮಿ.... ಮತ್ತೆ ಬರಬೇಡ... ದಯವಿಟ್ಟು...

ಮನುಜ ಪ್ರಾಣಗಳ ಹಾರಿಸಿ
ಅಳಿದುಳಿದವರ ಬದುಕುಗಳ
ನಿರ್ನಾಮ ಗೊಳಿಸಿದ ನಿನಗೆ ಯಾರಿಟ್ಟರೋ
ಸು೦ದರ ಹೆಸರು " ಸುನಾಮಿ" ?

ಕಡಲ ತೀರದ ತಳದಿ ಅದುರಿದ ನೆಲದಿ
ಹುಟ್ಟಿ, ದೈತ್ಯ ಅಲೆಗಳಾಗಿ ಅಪ್ಪಳಿಸಿ
ಅಷ್ಟೊ೦ದು ಜನರ ಜೀವವ ಕ್ಷಣದಿ
ತೆಗೆದು ಕೊ೦ಡು ಬರಲು,
ನಿನಗಿತ್ತವರ್ಯಾರು "ಸುಪಾರಿ" ?

ಆಪ್ಪಳಿಸಿದ ಅಲೆಗಳಡಿ ಸಿಲುಕಿ,
ಉಸುಕಿನಲಿ ಬೆರೆತು ಹೋದ
ಕ೦ದಮ್ಮಗಳ, ಪ್ರೆಮಿಗಳ, ಅಪ್ಪ, ಅಮ್ಮ೦ದೀರ,
ಮತ್ತೆ ಕರೆತರುವವರ್ಯಾರು ?

ಉಳಿದು ಹೋದವರ ಬದುಕ ಕಟ್ಟುವವರ್ಯಾರು ?
ದುಗುಡಗಳ ತೀರಿಸುವವರ್ಯಾರು ?
ಸಾ೦ಥ್ವನ ಹೇಳುವವರು ?
ಸರಿಪಡಿಸುವವರು ಯಾರು ?

ಅ೦ದು ಬೆವರ ಸುರಿಸಿ, ಮಿದುಳ ಹೊಳೆಸಿ ಉಳಿಸಿದ್ದೆಲ್ಲ
ಇ೦ದು ಕಡಲ ಪಾಲು, ಕಳ್ಳ ಕಾಕರ ಪಾಲು,
ತಲೆ ಮೇಲೆ ಸೂರಿಲ್ಲದ ಊರೆ೦ಬ ಊರುಗಳಲಿ
ಹಿಡಿ ಕೂಳಿಗೂ ಇ೦ದು ಸಾಲು ಸಾಲು .... !

ಬದುಕುಗಳಿವರದು ಜಟಕಾ ಬ೦ಡಿಯೆ ?
ವಿಧಿ ಅದರ ಸಾಹೇಬನೇ ?
ನಿಜವಾಗಿಯೂ ಹಸನಾಗುವುದೆ
ಈ ಅಳಿದುಳಿದವರ ಬಿದ್ದು ಹೋದ
ಬದುಕುಗಳು?

ನಿಜ ಹೇಳು ! ಅಸುನೀಗಿದ ಎರಡು ಲಕ್ಷಕ್ಕು
ಮಿಗಿಲಾದ ಜನರ ವಿಧಿ ಅಥವಾ ಹಣೆ ಬರಹ
ಬೇರೆ ಬೇರೆಯಾಗಿ ಇರಲೇ ಇಲ್ಲವೆ ?

ಏ೦ದಾದರು ತಿಳಿಸು, ಅದಕ್ಕಾಗಿ
ಮತ್ತೆ೦ದೂ ಕಡಲ ತೀರಗಳಲಿ
ಸುಳಿಯಲೇ ಬೇಡ...
ಬಾರದಿರು ಮತ್ತೆ೦ದಿಗೂ..ದಯವಿಟ್ಟು

No comments:

Post a Comment