Thursday 24 November 2011

ಒಹ್  ಮನಸೇ  …. ನೀನು  ನನ್ನೊಳಗೆ  ಇರುವುದರಿಂದಲೇ     ಅಲ್ಲವೇ  ಅವಳು  ಮತ್ತವಳ     ನೆನಪು  ಅಂತರಾಳದಲ್ಲಿ  ನಾಲ್ಕಾರು  ವರ್ಷಗಳಾದರೂ    ಅಳಿಯದೆ    ಉಳಿದಿರುವುದು    ?  ಮನೆಯಿಂದ  ತಂದ  ಮುಟಿಗೆಯಷ್ಟು   ತಿಂಡಿಯಾ   ಬಿಸಿ  ತಾಳಲಾರದೆ  ಸ್ಟೀಲು  ಡಬ್ಬ  ಕನಳುತಿತು ,   ಪಾಠ  ಆಲಿಸುವುದರಲ್ಲೇ  ಮಗ್ನಳಾದ   ಅವಳರಿವಿಗೆ  ಬರದೆ  ಕದ್ದು  ತಿಂದ ,  ಕಾಲೇಜು  ಕ್ಲಾಸುಗಳಿಗೆ  ಚಕ್ಕರ್  ಹೊಡೆದು  Ind-suzuki ಬೈಕ್  ಲಿ  ಊರ  ದಾಟಿ  ನದಿ   ತೀರ , ದೇಗುಲ  ಕೊಳ  ಕೊಪ್ಪಳ , ಸಿನಿಮಾ  ಅಂತೆಲ್ಲ   ಇಡೀ     ವರ್ಷ  ತಿರುಗಿ      ಕೊನೆಯಲ್ಲಿ  ಯುದ್ದಕಾಲೆ  ಶಸ್ತ್ರಬ್ಯಾಸ  ಎಂಬಂತೆ ಇಂತ  ಚಳಿ  ದಿನಗಳಲ್ಲೇ    ಅಲ್ಲವೇ  ನಾವು  ಪುಸ್ತಕಗಳ   ಮೊದಲ  ಪುಟ  ತಿರುವುತ್ತಿದ್ದುದು? 

ಆದರೂ  ವರ್ಷವೆಲ್ಲ   ಶ್ರದ್ದೆ     ಇಂದ  ಓದಿನಲ್ಲೇ  ಮುಳುಗಿದ್ದ  ಹುಡುಗ  ಹುಡುಗಿಯರೂ  ನಾಚುವಂತೆ   ಮೂಟೆ  ತಂಬ  Marks ಪಡೆಯುತ್ತಲೂ   ಇದ್ದೆವು .

ಮುತ್ತು , ವಜ್ರ , ವೈಡೂರ್ಯಗಳ  ಹಾದಿ     ಬದಿಯಲ್ಲಿ     ಕೊಳಗ  ಗಳ  ಅಳತೆಯಲಿ    ಮಾರುತ್ತಿದ್ದ   ವಿಜಯನಗರ  ಸಾಮ್ರಾಜ್ಯದ              ದಿನಗಳಿಗೂ  ಮಿಗಿಲು         ನಮ್ಮೀ                         ಕಾಲೇಜು  ದಿನಗಳು    ಎಂದು   ಅವಳು  ಅದ್ಯಾವ  ಉಮ್ಮೇದಿ  ಇಂದ  ಹೇಳಿದಳೋ …. “THIS TOO WILL PASS AND NOTHING IS ETERNAL IN THIS WORLD “ ಎಂದು  ಕೆನ್ನೆ  ಚಿವುಟಿ    ಅದ್ಯಾಕೆ  ನಾ  ಹೇಳಿದೆನೋ  … ಅಂತೂ  ಕಾಲ   ಗರ್ಭದಲಿ    ಕದಲಿ     ಹೋಗೆ ಹೋಗಿಬಿಟ್ಟವು  ಕಾಲೇಜಿನ   ಆ  ದಿನಗಳು ….

  

No comments:

Post a Comment