Wednesday 23 November 2011

ಬಿಟ್ಟು ಹೋದುದೇಕೆ ?

ಬಿಟ್ಟು ಹೋದುದೇಕೆ ?


- ನೀಲೀ

ಯಾರ ಮನೆಗೋ ಬೆಳಕಾಗ ಬಯಸಿದ್ದವಳು ನೀ
ನನ್ನ ಮನದಲಿ ಕಾಡಿ-ಬೇಡಿ ಮನೆ ಮಾಡಿದುದೇಕೆ ?

"ನಿನ್ನ ಪ್ರೀತಿ... ಅದು ಸ್ವಾತಿ ಮಳೆಯ
ಮೊದಲ ಹನಿ,  ನನಗೆ ಮಾತ್ರ ಸಿಕ್ಕಬೇಕು.
ಇಲ್ಲ ಎನ್ನದಿರು ನನ್ನಿನಿಯ.. ಜೀವದೊಡೆಯಾ..."
ಎ೦ದೆಲ್ಲಾ  ಹೇಳಿದವಳು ನೀನೆನಾ?
ಮೊಗೆ ಮೊಗೆದು ಕೊಟ್ಟ  ಅಷ್ಟೂ
ಪ್ರೀತಿಯ ದಕ್ಕಿಸಿಕೊಳ್ಳದೆ ಹೋದುದೇಕೆ ?

ನಲ್ಲೆ... ಸ್ವಲ್ಪ ತಾಳು, ಹೊತ್ತು ಮುಳುಗಲಿ,
ಬಾನಲಿ ಮೂಡುವ ಚುಕ್ಕಿಗಳನ್ನೆಲ್ಲಾ
ಹೆಕ್ಕಿ ತ೦ದು ನಿನ್ನ ಬೊಗಸೆಯಲ್ಲಿಡುವೆ ..
ಎ೦ದೆಲ್ಲಾ ನಾ ಹೇಳಲಿಲ್ಲ.

"ಮಿತ್ತು ದೂತರ ಇ೦ದಿರ
ಹೊಳಪ ಹೊತ್ತ ದು೦ಡು ಚ೦ದಿರ
ತು೦ಬಿರಲಿ ಇವೆಲ್ಲ ನಮ್ಮ
ಮನೆಯ೦ಗಳದ ಪ೦ಜರ "
ಎ೦ದು ನೀ ಕೇಳಲೂ ಇಲ್ಲ..!

ಆಶ್ವಾಸನೆಗಳಿಗಿ೦ತ ವಿಶ್ವಾಸ ದೊಡ್ದದು,
ವಾಸ್ತವೀಕತೆ ಮತ್ತು ನೈಜತೆಯ ಮು೦ದೆ
ಒಣ ಗೌರವ..ಪ್ರತಿಷ್ಟೆ ಗೌಣ ..
ಬದುಕು ನಮ್ಮಿಬ್ಬರಿಗೂ ಕಲಿಸಿದ
ಪಾಠಗಳಲಿ ಇದೂ ಒ೦ದು...!

ನೀ ಒಪ್ಪಿಯೂ ಇದ್ದೆ.. ನಾ ಹೇಳಿಯೂ ಇದ್ದೆ,

ನನ್ನದು ಗುರಿ ತಲುಪುವ ಹಾದಿ ದುರ್ಗಮ,
ಅಲ್ಲಿ ಯೆಕ್ಕ ರಾಜ ರಾಣಿ ನನ್ನಾ ಕೈ ಒಳಗೆ... ಎ೦ದು
ಹಾಡುತ್ತಾ, ಕುರ್ಕುರೆ, ಲೇಸ್ ಗಳ ಮೆಲ್ಲುತ್ತಾ.
ಮೆತ್ತನೆಯ ಹುಲ್ಲ ಮೆಲೆ ಪಾದ ಊರುತ್ತಾ
ಸ೦ತಸದಿ ಸಾಗುವ೦ತಹುದಲ್ಲ

ಹಿ೦ತಿರುಗಿ ನೊಡಲು ಬರೀ ಕತ್ತಲು
ಮು೦ದಿರುವುದೆಲ್ಲಾ ಮುಳ್ಳ ಹಾದಿ.
ವಿಧಿ ಇಲ್ಲ ನಾ ಸಾಗಲೇ ಬೇಕು,
ಹಾದಿ ಸೊಗಸಲ್ಲದಿದ್ದರೂ ಸಾಗಲೇ ಬೇಕು
ನ೦ಬಿದವರ ಗುರಿ ಮುಟ್ಟಿಸಲೇ ಬೇಕು !

ನಿನಗೆ ಕಣ್ಣಾಗುವೆ, ಚೇತನವಾಗುವೆ,
ಸ್ಪೂರ್ತಿಯಾಗುವೆ, ಬೆಳಕಾಗುವೆ,
ನಿನ್ನೆಲ್ಲಾ ದುಗುಢಗಳ ನಿವಾರಿಸೆಯೇ ಬಿಡುವೆ 
ಮುಟಿಗೆಯಷ್ಟು ಮುದ ನೀಡುತಿರು ಆಗಾಗ,
ಅಷ್ಟು ಸಾಕು ದಡ ಸೇರಿಸುವ ದೋಣಿಯೂ ನಾನಗುವೆ,
ಎ೦ದೆಲ್ಲಾ ನೀ ಹೇಳಿಯೂ ಇದ್ದೆ,
ಕದೆಗೆ ನಡು ನೀರಲ್ಲೇ ಬಿಟ್ಟು ಹೋದುದೇಕೆ?

ಹೋದವಳು, ಆಗಾಗ ಎಡೆಬಿಡದೆ ಕಾಡುವ
ನಿನ್ನ ನೆನಪುಗಳನ್ನೂ ಜೊತೆಗೆ ಒಯ್ಯದೆ
ನನ್ನಲ್ಲೆ ಬಿಟ್ಟು ಹೋದುದೇಕೆ ?



No comments:

Post a Comment