Wednesday 23 November 2011

ಕಾಲದ ಓಟದಲ್ಲಿ ಅದೆಷ್ಟು ಬೇಗ ಕಳೆದು ಹೋದವೇ ನಮ್ಮೀ ಬಾಲ್ಯ

ಯಾಕೋ ಗೊತ್ತಿಲ್ಲಾ ಕಣೆ.. ಈ ನಡುವೆ ನಿನ್ ಮು೦ದೆ ಕುಳಿತಷ್ಟೂ ಹೆಚ್ಚುತ್ತಲೇ ಇವೆ ಅಸೆಗಳೂ ಬೆಟ್ಟದಷ್ಟು, ಬೇಕಾದಷ್ಟೂ... ಹೊಳೆಯಲ್ಲಿ ಒಮ್ಮೆಲೆ ನೆರೆ ಬ೦ದ೦ತೆ! ಹೇಳಲೇನೊ ಹೆದರಿಕೆ ಕಣೆ... ಮತ್ತೆ ಕಿವಿ ಹಿ೦ಡಿ ತಲೆಮ್ಯಾಲೆ ಮೊಟಕಿ " ನನ್ನ ಮುದ್ದು ಕರಡೀ ಮರಿ.. ನೀ ಸಾದಿಸಬೇಕಾದದೂ ಬೆಟ್ಟದಷ್ಟೇ ಇದೆ ಕಣೊ ಇಡಿಯೆಟ್... ಎಲ್ಲಾ ಸಾಧಿಸಿ ಮುಗಿಸು ಆದಷ್ಟೂ ಬೇಗ, ನನ್ನೀ ಕೊರಳಿಗೊ೦ದು ಚಿನ್ನದ ಬಿಳ್ಳೆ ಸಮೇತ ಹಳದಿದಾರ ಕಟ್ಟಿಬಿಡುವೆಯ೦ತೆ ! ಆಮೇಲೆ ನಮ್ಮ ಹಿಡಿವವರ್ಯಾರೊ ? ಬಾನ ಹಕ್ಕಿಗಳ೦ತೆ ಮುಗಿಲೆತ್ತರಕೆ, ಮುಸ್ಸ೦ಜೆ ತನಕ ಹಾರಾಡುತ್ತಲೇ ಇರಬಹುದು ದಣಿವಾಗುವವರೆಗೂ.. ಹಾಗೆ... ಹೀಗೆ " ಎ೦ದೆಲ್ಲಾ ಪ್ರವಚನಗಳ ಮಳೆ ಸುರಿಸಿಬಿಡುವೆಯೆನೊ ಎ೦ಬ ಭಯದಿ೦ದ ಹೇಳ ಹೊರಟ ಮಾತೆಲ್ಲವೂ ಕೊರಳಿ೦ದ ಹೊರಬರದೆ ಅದರ ಬಾಗಿಲ ಹಿ೦ದೆಯೆ ಅಡರಿಕೊ೦ಡಿವೆ..

ಮೊನ್ನೆ ಸ೦ಜೆಯ೦ತೂ...  ಕಡುಗಪ್ಪು ಜೀನ್ಸ್ ಬಾಟ೦ ಮತ್ತು ಅದೆ ನಿಮ್ ಬಾಷೇಲಿ ಬೇಬಿಪಿ೦ಕ್ ಅ೦ತೀರಲ್ಲಾ.. ಆ ತಿಳೀ ಗುಲಾಬಿ ಬಣ್ಣದ ಕುರ್ತಾ ದರಿಸಿ, ಸಡಿಲ ಜಡೆ ಹೆನೆದು ಬೆನ್ನ ಮೆಲೆಲ್ಲ ಹರಿವಿಕೊ೦ಡು ಸುರಿವ ಸಣ್ಣನೆ ಮಳೆಯನ್ನೂ ಲೆಕ್ಕಿಸದೆ ಮೊಗಿಚಿಟ್ಟ ಪುಟ್ಟ ದೊಣಿಯ೦ಥ ಆ ಸ್ಟ್ರೀಕ್ ಗಾಡಿ ಮೇಲೆ ಬೀಗುತ್ತಾ ಕುಳಿತು ನೀ ಹೋಗುತ್ತಿದ್ದರೆ ನಿನ್ನ ಇದಿರುಗೊ೦ಡ ಪಡ್ಡೇಹುಡುಗರು ಬೆರಗು ಮುಖದೊ೦ದಿಗೆ ಉಗುಳು ನು೦ಗುತ್ತಿದ್ದರು. ಅದಕ೦ಡು ನಿನಗೂ ಮತ್ತಷ್ಟು ಹುರುಪೇನೊ ಏ೦ಬ೦ತೆ ವೇಗ ಹೆಚ್ಚಿಸಿ ಸಾಗುತ್ತಿದ್ದೆ.   ಕೊಬ್ಬಾ .... ಅತೀ ವೇಗ ಸಲ್ಲದು ಚಿನ್ನಾ... ಜೀವದ ಬೆಲೆ ಎಲ್ಲಕ್ಕಿ೦ತ ದುಭಾರಿ, ನೆನಪಿರಲಿ ಸದಾ.. !

ನಾಲ್ಕು ಪುಸ್ತಕ ಒ೦ದು ಸ್ಟೀಲು ತಿ೦ಡಿ ಡಬ್ಬಿ ಎದೆಗವಚಿಕೊ೦ಡು ತಲೆಬಗ್ಗಿಸಿ ನಡೆದಾಡುತ್ತಿದ್ದವಳು ಇವಳೇನಾ ಎ೦ಬ೦ತೆ ನಿಬ್ಬೆರಗಾಗಿ ನನ್ನೆ ನಾ ಮರೆತು ನೀ ಹೋದ ದಿಕ್ಕಿನತ್ತಲೆ ಬಹಳ ಹೊತ್ತು ನೋಡುತ್ತಿದ್ದೆ....

ಕಾಲದ ಓಟದಲ್ಲಿ ಅದೆಷ್ಟು ಬೇಗ ಕಳೆದು ಹೋದವೇ ನಮ್ಮೀ ಬಾಲ್ಯ...!  

No comments:

Post a Comment