Wednesday 23 November 2011



ನಲ್ಲೆ...
ಮುದ್ದಾದ ಮುಖ ಕೊಟ್ಟ, ಮಳೆ ನಿಂತು ಹೋದ ಮೇಲೆ ಮೂಡೋ ಕಾಮನ ಬಿಲ್ಲಲ್ಲಿ ಸ್ವಲ್ಪವೇ ಮುರಿದು ಚಂದನ ದೊಂದಿಂಗೆ ಹದವಾಗಿ ಬೆರೆಸಿ ಅದನ್ನು ನಿನ್ನ ಮೈಗೆ ಹಚ್ಚಿ ಚಂದನದ ಗೊಂಬೆ ಮಾಡಿದ
ಕಣ್ಣು ಮೂಗು. ಕೆನ್ನೆ ತುಟಿ. ಮೈ ಮಾಟವೆಲ್ಲ ತೀಡಿ ತಿದ್ದಿ ಅಷ್ಟು  ಶ್ರದ್ದೆ ಇಂದ ರೂಪಿಸಿದ ಭಗವಂತ ಮೂಗಿನ ತುದಿಯಲ್ಲಿನ ಕೋಪ ವನ್ನೇಕೆ ಒರೆಸದೆ ಹಾಗೆ ಬಿಟ್ಟನಿನ್ನ ಅಂದ ಕಂಡು ಅವನೂ ಕಂಗೆಟ್ಟು ಕಂಗಾಲದನೆನು? ಮಾತು ಮಾತಿಗೂ ಮುನಿವ ಒಲುಮೆ ಹಕ್ಕಿಗಗನದಲ್ಲೂ ಕಾಣಲಾಗದ ಬೆಳ್ಳಿ ಚುಕ್ಕಿ ! ಅಷ್ಟರೊಳಗೆ ನಾಲ್ಕಾರು ಮಿಸ್ ಕಾಲ್ ಗಳೇಕೆ? ಇನ್ನು ಕಾಯಲಾರೆ ಹೊರಟೇ ಬಿಡುವೆ ಎಂಬ ಬೆದರಿಕೆಯಾಕೆ?

ಇಗೋ ಇನ್ನೈದು ನಿಮಿಷದಲಿ ನಿನ್ನ ಬಳಿ ಇರುವೆನು ಸಾಯಬೇಡ ವಲ್ಪ ತಡೀ... ಮತ್ತೆಂದೂ ಹೀಗೆ ಕಾಯಿಸಲಾರೆ  ನಮ್ಮೊರ ಚಿತ್ರ ಲಿಂಗ ದೇವರ ಮೇಲಾಣೆ ! ಸರಿನಾ ? ಪ್ಲೀಸ್ ಅಲ್ಲೇ ಇರು.
ಹೌದು ಎಂದಾದರು ಕೆ.ಅರ್ ಪುರಂ ಇಂದ ಎನ್.ಜಿ.ಎಫ್, ಇಸೋಲೆಶನ್, ಇಂದಿರನಗರ್ ಅರ್ ಟಿ ಕಾಂಪ್ಲೆಕ್ಷ ದಾಟಿ ಅಲಸೂರ್ ಏರಿ ಮೇಲೆ ಈಥರ ಸಂಜೆ ಬೈಕ್ ಮೇಲೆ ಬಂದು ನೋಡು ನಿನ್ನ ನೋಡ ಬರುವ ನನ್ನ ನಾನ ಅವಸ್ತೆ   ಟ್ರಾಫಿಕ್, ಸ್ಟಾಪು ಗಳು, ಮಂದಗತಿ ಸಾಗೋ ವಾಹನಗಳು ಎಲ್ಲ ಗೊತ್ಹಾಗುತ್ತೆ. ಮತ್ತೆಂದೂ ಪರಿ ಕಾಡಲ್ಲಾ ಬೇಗ ಬಾ ಬೇಗ ಬಾ ಎಂದು....


మనసా...
 ನಲ್ಲೆ ನೀ ಬಿಟ್ಟು ಹೋದಮೇಲೆ ನಿನ್ನ ನೆನಪೂ ನನಗೆ "ಎದೆಯಲ್ಲಿ  ಹೊತ್ತಿ ಉರಿವ ಎದೆಯ ಬೆಂಕಿ"
ಯಾರ ಹಂಗೂ ಇಲ್ಲದೆ ಎತ್ತರದ ಬಾನಲಿ ಹಾರೋ ಜೋಡಿ ಹಕ್ಕಿಗಳ ಕಂಡಾಗಲಂತೂ ಎಂತದೋ ಅನಿರ್ವಚನೀಯ ತಳಮಳ ! ನಾವಾದರೂ ಯಾರ ಕೆಂಗಣ್ಣಿಗೆ ಗುರಿಯಾಗಿದ್ದೆವು ಅಲ್ವಾ ? ಸಣ್ಣದೋ ದೊಡ್ಡದೋ ನನ್ನದೂ ಅಂತ ಕೆಲಸವೊಂದು ಸಿಕ್ಕಲಿ, ಅಸ್ತರಲಿ ನಿನ್ನ ಓದು
ಮುಗಿಯಲಿ, ಹಾಯಾಗಿ ಬದುಕು ಸಾಗಿಸುವೆ ಎಂಬ ತನ್ನಂಬಿಕೆ ಇಬ್ಬರಲೂ ಮೂಡಲಿ, ನಂತರ ನಾವೇ ಜಗತ್ತಿಗೆ ಪರಿಚಯ ಮಾಡಿಕೊಳ್ಳೋಣ. .. " ನಾವಿಬ್ಬರೂ ಜೋಡಿ ಹಕ್ಕಿಗಳು, ಹರಸಿ ಬದುಕು ಹಸನಾಗಿಸಿಕೊಳ್ಳಲು" ಎಂದು ಎರಡೂ ಮನೆಗಳಲ್ಲಿ ಕೇಳೋಣ ಎಂದೆಲ್ಲ ತೀರ್ಮಾನಿಸಿದ್ದೆವು.
ನೀ ಕೇಳಿಯೂ ಇದ್ದೆ.
ಇಲ್ಲಿ ಸಂಜ ಸೂರ್ಯ ಕಿರಣ ಗಳ ನೋಡಲು ಮುರುಡೇಶ್ವರ ವೆ ಸುಂದರ ತಾಣ... ಕಡಲ ತೀರದ ಕಲ್ಲು ಬೆಂಚಿನ ಮೇಲೆ ಕುಳಿತು ಆಗಾಗ ದಡದ ಮೈ ತಡವಿ ಸಾಗೋ ನೀರಲೆಗಳಲಿ ಕಾಲುಗಳ ತೋಯಿಸಿ ಜಾಡಿಸುತಾ
ಮುಕೇಶ್ " ಸುನುರೆ ತಾಲ್ ಮಿಲಾ ನಡಿಕೆ ಜಲ ಮೇ ನದೀ ಮಿಲೇ ಸಾಗರ್ ಕೆ ... ಸಾಗರ್ ಮಿಲೇ ಕೌನುಸಿ ಜಲ್ಮೆ ಕೋಯಿ ಜಾನೆನಾ" ಅಂಥಹ ಮಸ್ತು ಹಾಡುಗಳನು, ಸಿ.ಅಶ್ವಥ್ " ಕಾಣದ ಕಡಲಿಗೆ ಹಂಬಲಿಸಿದೆ ಮನ....ನೋಡ ಬಲ್ಲೇನೆ ಒಂದು ದಿನ ಕಡಲನು ಸೇರಬಲ್ಲೆನೆನು..." ಮತ್ತಿತರ ಹಾಡುಗಳೊಂದಿಗೆ ಜುಗಲ್ ಬಂದಿ ಯಂತೆ ಕೇಳಬೇಕು ಅಂತೆಲ್ಲ ಅಂದು ಕೊಂಡಿದ್ದೆವು ನೆನಪಿದೆಯಬಹುಷಃ ನಿನ್ನ ಭಗವಂತನಿಗೂ ಅಸೂಯೆ ಬಂತೇನೋ ನಿನ್ನೊಡನೆ ಇದ್ದ ನನ್ನ ಕಂಡೂ.. ಅದಕೆ ಇರಬೇಕು ನೊರೆ ಹಾಲಿನಂತಾ ನಿನ್ನ ಮನಸಿಗೂ ಹುಳಿ ಹಿಂಡಿ ಬಿಟ್ಟ.. ನಲ್ಲೆ ನಿನ್ನಲ್ಲಲ್ಲದೆ ಬೇರೆಯವಳು ಅಪ್ಸರೆಯೇ ಇದ್ದರೂ ನಿನ್ನನ್ನು ನಾ ಕಾಣಲಾರೆ !
ಹೀಗೆಲ್ಲ... ನಿನಗೆ ಒಂದು ಪತ್ರ ಬರೆಯುವಾಸೆ...  ಒಂದು ದಿನದ ಮಟ್ಟಿಗಾದರೂ ನನ್ನ ಬಿಟ್ಟು ದೂರ ಇರೆ ಪ್ಲೀಸ್.... ದೂರ ಅಂದರೆ......... ನೀನು ದೇವನಹಳ್ಳಿ ಏರ್ಪೋರ್ಟ್.... ನಾ... ಕೆಂಗೇರಿ.... ರೈಲ್ವೆ ಸ್ಟೇಶನ್..... ಸ್ಟುಪಿಡ್ ನಿಂಗೆ ಈಗ ಕೋಪ ಬಂದಿರುತೆ...ಅದಕ್ಕೆ ಅಂತಾ ಇವತ್ ಲೇಟಾಗಿ ಬರಬೇಡ... ಟಿಟ್ ಫಾರ್ ಟ್ಯಾಟ್ ಅಂತ ನಿನ್ನೆದು ನೆನಪಿಟ್ಟು ಸಥಾಯಿಸಬೇಡ...

No comments:

Post a Comment