Wednesday 23 November 2011

ನಾನೂ ಬಂದೆ ಬೆಂಗಳೂರು ಎನ್ನುವ ಮಾಯಾ ನಗರಿಯ ಮಾಯಾ ಲೋಕಕ್ಕೆ

ಅವರುಗಳು ಹುಟ್ಟುವಾಗ ಇರಲಿ, ನನ್ನ ಮದುವೆ ಅಂತ ಒಂದು ಸಂಬ್ರಮದ ಘಟನೆ ನಡೆದಾಗ ನನಗೆ ಅಂತ  ಬರುತಿದ್ದ ಸಂಬಳ ಆದರು ಎಷ್ಟು? ಕೇವಲ ಮೂರು ಸಾವಿರದ ಎಂಟು ನೂರು.ಅದರಲ್ಲೇ ಅಪ್ಪ ಅಮ್ಮ ಆಕೆ, ಇಬ್ಬರು ಮಕ್ಕಳು ಜೀವನ ಹಾಗು ಹೀಗೂ ಸಾಗುತಿತ್ತು.  ಆಸ್ಪತ್ರೆ ಖರ್ಚು, ಅಥಿತಿ ಸತ್ಕಾರಗಳು, ದೂರದೂರಿನ ಮನೆ ಮಂದಿಯೆಲ್ಲ ಸೇರಿ ಹೋಗಲೇ ಬೇಕಾದ ಹತ್ತಿರದ ಸಂಬಂದಿಗಳು ಮಾಡುವೆ ಮುಂಜಿ ಗೃಹಪ್ರೆವೇಶದಂತ ಶುಭಕಾರ್ಯಗಳು, ಶಾಲೆಯ ಫೀಸ್, ಬೈಕಿಗೆ ಪೆಟ್ರೋಲು, ಅದರ ಮೇಲಿನ ಬ್ಯಾಂಕ್ ಲೋನ್ ಇ ಎಂ ಐ ಇವುಗಳ ಜೊತೆಗೆ ಸಾಲಾಗಿ ಬರುವ ಹಬ್ಬ ಹರಿದಿನಗಳು ಎಲ್ಲವನ್ನು ಆಕೆ ತೂಗಿ ಕೊಂಡು ಹೂಗುತಿದ್ದಳು, ಮೈತುಂಬ ಜನರ ತುಂಬಿಕೊಂಡು ಸಾಗುವ ೩೩೩ ಬಿ ಟಿ ಎಸ್ ಬಸ್ ನಂತೆ.

ಬದುಕನ್ನು ಮತ್ತಷ್ಟು ಹಸನು ಮಾಡಿಕೊಳ್ಳುವ ಹಂಬಲ.... ದೇಶದ ಮೂಲೆ ಮೂಲೆಗಳಿಂದ ಬಂದಿಳಿವ ಜನರಂತೆ ನಾನೂ ಬಂದೆ ಬೆಂಗಳೂರು ಎನ್ನುವ ಮಾಯಾ ನಗರಿಯ ಮಾಯಾ ಲೋಕಕ್ಕೆ ಅನ್ನ ಅರಸಿಕೊಂಡು. ಮನೆ ಮಂದಿಯನ್ನೆಲ್ಲಾ ಅಲ್ಲೇ ಬಿಟ್ಟು  ಹೀಗ್ಗೆ  ೫ -೬ ವರ್ಷದ ಹಿಂದೆ.  ಬದುಕ ಕಟ್ಟಿಕೊಂಡ ನಂತರ ನಿಮ್ಮನ್ನೂ ಕರೆಸಿಕೊಂಡು ಮನೆ ಮಾಡುವೆ ಎಂದು... 
 ಆಮೇಲೆ ಏನಾಯ್ತು
 ಸ್ವಲ್ಪ ವೈಟ್ ಮಾಡಿ ಪ್ಲೀಸ್…..

No comments:

Post a Comment